ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಯುವ ರೆಡ್ ಕ್ರಾಸ್ ಘಟಕ

ಯುವ ರೆಡ್ ಕ್ರಾಸ್ ಘಟಕ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೆ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಧ್ಯೇಯವಾಗಿದೆ. ವಿದ್ಯಾರ್ಥಿಗಳು ತಮ್ಮ ಸಹ-ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆಯನ್ನು ಪ್ರದರ್ಶಿಸಲು ಮುಕ್ತ ಅವಕಾಶ ನೀಡಲಾಗುತ್ತದೆ.

ಸಹ-ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಪಠ್ಯಕ್ರಮದ ಅವಿಭಾಜ್ಯ ಅಂಗವಾಗಿವೆ. ಮಾನವೀಯ ಮೌಲ್ಯಗಳು ಮತ್ತು ಮಾನವೀಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಬೆಳೆಸಿ ಮತ್ತು ಅಭಿವೃದ್ಧಿಪಡಿಸಲು ಕಾಲೇಜು “ಯುತ್ ರೆಡ್ ಕ್ರಾಸ್ ಘಟಕ” ವನ್ನು ಪ್ರಾರಂಭಿಸಿದೆ.

ರೆಡ್ ಕ್ರಾಸ್ 8 ದಶಕಗಳಿಂದಲೂ ಯುದ್ಧ ಸಮಯದಲ್ಲಿ ಶಾಂತಿ ಕಾಪಾಡುವ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಮಾನವೀಯ ಸೇವಾ ಸಂಸ್ಥೆಯಾಗಿದೆ. ಇದು ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಆಕ್ಟ್ ಘಿಗಿ 1920 ಎಂದು ಕರೆಯಲ್ಪಡುವ ಸಮಸತ್ತಿನ ಆಕ್ಟ್ ಅಡಿಯಲ್ಲಿ ರಚಿಸಲ್ಪಟ್ಟಿದೆ. ರೆಡ್ ಕ್ರಾಸ್ ಎಂಬುವುದು ಮಾನವೀಯ ಸೇವೆಗಳಿಗೆ ಮೀಸಲಾದ ಅಂತರಾಷ್ಟ್ರೀಯ ಸಂಘಟನೆಯಾಗಿದೆ. ಇದರ ಪ್ರದಾನ ಕಛೇರಿಯು ಸ್ವಿಟ್ಜರ್ಲೆಂಡ್ ನ ಜಿನೀವಾದಲ್ಲಿದೆ. ಇದು ಅನೇಕ ರಾಷ್ಟ್ರೀಯ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸಂಸ್ಥೆಯನ್ನು ಹೊಂದಿದೆ.