ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಪೌರತ್ವ ತರಬೇತಿ ಶಿಬಿರ (CTC)

ಪೌರತ್ವ ತರಬೇತಿ ಶಿಬಿರ (CTC)

ಪೌರತ್ವ ತರಬೇತಿ ಶಿಬಿರವು ತರಬೇತಿ ಕಾರ್ಯ ಯೋಜನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ತರಬೇತಿಯು ಕಲಿಕಾರ್ಥಿಗಳಲ್ಲಿ ಬೌದ್ಧಿಕ ಬೆಳವಣಿಗೆ ಮತ್ತು ಉತ್ತಮ ನಾಗರೀಕ ಗುಣಗಳನ್ನು ಬೆಳಸುತ್ತದೆ. ಇದು ರಾಷ್ಟ್ರಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳಲು ಸಮರ್ಪಕ ಶಕ್ತಿಯನ್ನು ಅಭಿವೃದ್ದಿಪಡಿಸುತ್ತದೆ. ಎಲ್ಲಾ ಪ್ರಾಥಮಿಕ ಮತ್ತು ಪೌಢ ಶಿಕ್ಷಣದ ಪಠ್ಯಕ್ರಮದ ಗುರಿಗಳನ್ನು ಕೌಶಗಳನ್ನು ಬೆಳಸುತ್ತದೆ. ಈ ತರಬೇತಿ ಶಿಬಿರದ ಪ್ರಮುಖ ಉದ್ದೇಶ ಯುವ ಜನತೆಯನ್ನು ಶಕ್ತಿಯುತಗೊಳಿಸುವುದು ಉತ್ತಮ ಕೌಶಲಗಳನ್ನು ಬೆಳಸುವುದು ಹಾಗೂ ಪ್ರಜಾಪ್ರಭುತ್ವ ಗುಣಗಳ ಬೆಳವಣಿಗೆಗೆ ಮತ್ತು ಸಮಾಜದ ಸಾರ್ವಜನಿಕ ಬದುಕಿನ ಅಭ್ಯಾಸವನ್ನು ಹೊಂದುವುದಾಗಿದೆ.

ಪೌರತ್ವ ತರಬೇತಿ ಶಿಬಿರದ ಉದ್ದೇಶಗಳು

ಶಿಬಿರದ ಮುಕ್ತಾಯಕ್ಕೆ ಪ್ರಶಿಕ್ಷಣಾರ್ಥಿಯು:

  • ಸಮುದಾಯದ ಜೀವನದ ಅರಿವನ್ನುಂಟುಮಾಡುವುದು.
  • ಗ್ರಾಮೀಣ ಜನರೊಂದಿಗೆ ಬೆರೆಯುವುದು ಮತ್ತು ಗ್ರಾಮೀಣ ಜನರ ಜೀವನ ಮತ್ತು ಸಮಸ್ಯೆಗಳನ್ನು ತಿಳಿಯುವ ಅವಕಾಶ ನೀಡುವುದು.
  • ಸಹಕಾರ ಪರಸ್ಪರ ತಿಳುವಳಿಕೆ ಮತ್ತು ಹೊಂದಾಣಿಕೆಯ ಮನೋಭಾವನೆಯನ್ನು ಬೆಳೆಸುವುದು.
  • ಶ್ರಮಗೌರವವನ್ನು ಬೆಳೆಸುವುದು.
  • ಪ್ರಶಿಕ್ಷಣಾರ್ಥಿಗಳಲ್ಲಿ ಸಂಘಟನೆ, ಸಹಭಾಗಿತ್ವ ಮತ್ತು ಸಮಾನತೆಯ ಗುಣಗಳನ್ನು ಬೆಳಸುವುದು.