Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ಶಿಕಾರಿಪುರದ ಬಗ್ಗೆ

ಶಿಕಾರಿಪುರದ ಬಗ್ಗೆ

ಶಿಕಾರಿಪುರವು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕು ಪ್ರಧಾನ ಕಾರ್ಯಸ್ಥಾನವಾಗಿದೆ. ಶಿಕಾರಿಪುರ ತಾಲ್ಲೂಕು ಒಂದು ಸಮೃದ್ಧ ಸಂಸ್ಕೃತಿಯ ಅಕ್ಷರನಿಧಿ. ಅದನ್ನು ಬಗಿದಷ್ಟು ಬೊಗಸೆತುಂಬ ಎದೆಬಾನು ತುಂಬುವಷ್ಟು ವೈವಿಧ್ಯಮಯವಾದ ಬಹುರೂಪಿ ಏಕಾತ್ಮತೆಯ ಸಂಸ್ಕೃತಿ ಕಂಡುಬರುತ್ತದೆ. ಹಿಂದಿನ ಕಾಲದಲ್ಲಿನ ವಿದ್ಯಾ ಕೇಂದ್ರಗಳೆಂದರೆ ಅಗ್ರಹಾರ, ದೇವಸ್ಥಾನ(ಮಠ), ಬ್ರಹ್ಮಪುರಿ, ಮತ್ತು ಘಟಿಕಾಸ್ಥಾನ. ವಿಶೇಷವೆಂದರೆ ಕರ್ನಾಟಕದ ಮೊಟ್ಟ ಮೊದಲ ವಿದ್ಯಾಕೇಂದ್ರ ಶಿಕಾರಿಪುರ ತಾಲ್ಲೂಕಿನ ತಾಳಗುಂದದ ಘಟಿಕಾಸ್ಥಾನ. ಅಲ್ಲಿ ಅಧ್ಯಯನದಲ್ಲಿ ತೊಡಗಿದ ಮಯೂರಶರ್ಮನೆಂಬ ವಿದ್ಯಾರ್ಥಿಯೇ ಕನ್ನಡದ ಮೊಟ್ಟಮೊದಲ ಸಾಮ್ರಾಜ್ಯ – ಕದಂಬ ರಾಜವಂಶದ ಸ್ಥಾಪಕ. ಶ್ರೇಷ್ಠ ಸಮಾಜ ಸುಧಾರಕರು ಮತ್ತು 12ನೇ ಶತಮಾನದ ವಚನಕಾರರಾದ ಅಲ್ಲಮಪ್ರಭು, ಸಂತ ಅಕ್ಕಮಹಾದೇವಿಯವರು ಈ ಮಹಾನ್ ಭೂಮಿಯಲ್ಲಿ ಜನಿಸಿದರು. ಶಿಕಾರಿಪುರ ಶಿವಮೊಗ್ಗ ನಗರದಿಂದ ಕೇವಲ 48 ಕಿ.ಮೀ ದೂರದಲ್ಲಿದೆ ಮತ್ತು ಎಲ್ಲಾ ಪ್ರಮುಖ ಸ್ಥಳಗಳಿಗೆ ಬಸ್ಸುಗಳ ಸಂಪರ್ಕವನ್ನು ಹೊಂದಿವೆ. ಶ್ರೀ ಬಿ.ಎಸ್. ಯಡಿಯೂರಪ್ಪನವರು ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಹಾಗೂ ಈ ತಾಲೂಕಿನ ಪ್ರತಿನಿಧಿಯಾಗಿದ್ದು, ಇವರು ಈ ಸಂಸ್ಥೆಯ ಕತೃಗಳಾಗಿ ಮಾರ್ಗದರ್ಶಿಸುತ್ತಿದ್ದಾರೆ.