ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಕ್ರೀಡೆ ಹಾಗೂ ಆಟಗಾರ

ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸು ಇರುತ್ತದೆ:

ನಮ್ಮ ಕಾಲೇಜು ಕ್ರೀಡೆ ಮತ್ತು ಆಟಗಾರರಿಗೆ ಸಂಬಂಧಿಸಿದಂತೆ ಒಳಾಂಗಣ ಮತ್ತು ಹೊರಾಂಗಣದ ಅತ್ಯುತ್ತಮ ಕ್ರೀಡಾ ಸೌಲಭ್ಯವನ್ನು ಹೊಂದಿದೆ. ಅಂದರೆ ಕ್ರಿಕೆಟ್, ಬಾಸ್ಕೆಟ್‌ಬಾಲ್, ವಾಲಿಬಾಲ್, ಟೇಬಲ್ ಟೆನ್ನಿಸ್, ಕಬ್ಬಡ್ಡಿ, ಖೋ-ಖೋ, ಚೆಸ್, ಕೇರಂ, ವೈಯಕ್ತಿಕ ಆಟಗಳು ಮತ್ತು ಯೋಗ ಶಿಕ್ಷಣದ ಸೌಲಭ್ಯವನ್ನು ಹೊಂದಿದೆ. ನಮ್ಮ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗವು ಅತ್ಯುತ್ತಮ ಸೌಕರ್ಯ, ಸೂಕ್ತ ಅವಕಾಶಗಳು ಮತ್ತು ಸಮರ್ಪಕ ಸೌಲಭ್ಯಗಳನ್ನು ಹೊಂದಿದ್ದು, ಪ್ರತಿಭಾನ್ವಿತ ಕ್ರೀಡಾ ಪಟುಗಳಿಗೆ ಸಮರ್ಪಕ ಅವಕಾಶಗಳನ್ನು ಒದಗಿಸಿಕೊಡಲಾಗುತ್ತದೆ. ಆದ್ದರಿಂದ, ಕ್ರೀಡಾ ಸಾಮಾಗ್ರಿಗಳ ಸೌಲಭ್ಯಗಳನ್ನು ಬಳಸಿಕೊಳ್ಳಲು ಸೂಚಿಸಿರುತ್ತದೆ. ದೈಹಿಕ ಶಿಕ್ಷಣ ವಿಭಾಗವು ವ್ಯಕ್ತಿಯ ವೈಯಕ್ತಿಕ ಬೆಳವಣಿಗೆಗೆ ಮತ್ತು ಸಮಾಜದಲ್ಲಿ ಗಮನಾರ್ಹವಾದ ತೊಡಗುವಿಕೆಗೆ ಪ್ರೋತ್ಸಾಹಿಸುತ್ತದೆ. ಹಾಗೆಯೇ ವಿದ್ಯಾರ್ಥಿಗಳು ವಿಶ್ವ ವಿದ್ಯಾನಿಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಪ್ರೋತ್ಸಾಹಿಸುತ್ತದೆ. ಪ್ರತಿ ಶನಿವಾರ ಪ್ರಾರ್ಥನಾ ಕಾರ್ಯ ಮುಗಿದ ನಂತರ ಸಮೂಹ ವ್ಯಾಯಾಮದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ತೊಡಗಿಸಿ, ಅವರನ್ನು ದೈಹಿಕವಾಗಿ ಸದೃಢ ಮತ್ತು ದಿನನಿತ್ಯದ ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುವಂತೆ ಯೋಜಿಸಲಾಗಿದೆ. ಕಿರೀಟ ಪ್ರಾಯವೆಂಬಂತೆ ನಮ್ಮ ಕಾಲೇಜಿನ ಕೆಲವಾರು ಆಟಗಾರರು ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟದಲ್ಲಿ ಮತ್ತು ಇನ್ನಿತರೇ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿರುತ್ತಾರೆ. ಈ ಕ್ರೀಡೆಗಳಿಗೆ ವಿಶೇಷ ತರಬೇತಿ, ಪ್ರೋತ್ಸಾಹ, ಪ್ರೇರಣೆಯನ್ನು ನೀಡಿ ಅಂತರ್ ಕಾಲೇಜು ವಿಶ್ವ ವಿದ್ಯಾನಿಲಯ ಮಟ್ಟದ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಮಾಡಲಾಗಿದೆ.

DSC_0415 DSC00350
DSC_0465 DSC_0466
20-09-2013 21-09-2013 1