Kumadvathi College of Education,  Shikaripura

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
Home > ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆ

ರಾಷ್ಟ್ರೀಯ ಸೇವಾ ಯೋಜನೆ ಎನ್ನುವುದು ಭಾರತ ಸಕಾರದಿಂದ ಪ್ರಾಯೋಜಿತವಾದ ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಇದನ್ನು ಭಾರತ ಸರ್ಕಾರದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಮುನ್ನಡೆಸುತ್ತಿದೆ. ಗಾಂಧೀಜಿಯವರ ಜನ್ಮ ಶತಾಬ್ಧಿ ವರ್ಷವಾದ 1969 ರಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಇದರ ಮುಖ್ಯ ಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆ ಮೂಲಕ ಅಭಿವೃದ್ಧಿಗೊಳಿಸುವುದಾಗಿದೆ. ಈ ಸ್ವಯಂಪ್ರೇರಿತ ಸಂಸ್ಥೆಯ ಮೂಲ ತತ್ವವು ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರಪ್ರೇಮ ಮತ್ತು ಸೇವಾ ಭಾವನೆಗಳನ್ನು ಬೆಳಸುವುದಾಗಿದೆ.

ಧ್ಯೇಯವಾಕ್ಯ- ’ನನಗಲ್ಲ ನಿನಗೆ’

ಉದ್ದೇಶಗಳು:

• ನಾವು ಕೆಲಸ ಮಾಡುವ ಸಮುದಾಯವನ್ನು ಅರಿತುಕೊಳ್ಳುವುದು.
• ಸಮುದಾಯಕ್ಕೆ ಸಂಬಂಧಿಸಿದಂತೆ ತಮ್ಮನ್ನು ತಾವು ಅರ್ಥೈಸಿಕೊಳ್ಳುವುದು.
• ತಾವು ವಾಸಿಸುವ ಸಮುದಾಯದ ಅಥವಾ ಸಮಾಜದ ಸಮಸ್ಯಗಳನ್ನು ಅರಿಯಲು ಪ್ರಯತ್ನಿಸುವುದು.
• ಸಾಮಾಜಿಕ ಮತ್ತು ನಾಗರೀಕ ಜವಾಬ್ದಾರಿಯನ್ನು ಬೆಳೆಸಿಕೊಳ್ಳುವುದು.
• ವೈಯಕ್ತಿಕ ಮತ್ತು ಸಮುದಾಯದ ಸಮಸ್ಯಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಅವರ ಜ್ಞಾನದ ಬಳಕೆ ಮಾಡುವುದು.
• ಸಹಬಾಳ್ವೆ ಮತ್ತು ಜವಬ್ದಾರಿ ಹಂಚಿಕೆಗೆ ಅಗತ್ಯಾವಾದ ಸಾಮರ್ಥ್ಯವನ್ನು ಆಭಿವೃದ್ಧಿಪಡಿಸುವುದು.
• ನಿಪುಣತೆಯೊಂದಿಗೆ ಸಮುದಾಯದ ಭಾಗವಹಿಸುವಿಕೆಯನ್ನು ಸಜ್ಜುಗೊಳಿಸುವುದು.
• ಪ್ರಜಾಪ್ರಭುತ್ವದ ವರ್ತನೆಗಳೊಂದಿಗೆ ನಾಯಕತ್ವದ ಗುಣಗಳನ್ನು ಹೊಂದುವುದು.
• ತುರ್ತುಸ್ಥಿತಿ ಮತ್ತು ನೈಸರ್ಗಿಕ ವಿಪತ್ತುಗಳನ್ನು ನಿರ್ವಹಣೆ ಮಾಡುವ ಸಾಮರ್ಥ್ಯವನ್ನು ಹೊಂದುವುದು.
• ರಾಷ್ಟ್ರೀಯ ಏಕೀಕರಣ ಮತ್ತು ಸಾಮಾಜಿಕ ಸಾಮರಸ್ಯದ ಕುರಿತು ಅಭ್ಯಾಸಿಸುವುದು.

ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕವನ್ನು ಕುವೆಂಪು ವಿಶ್ವವಿದ್ಯಾಲದ ಮಾನ್ಯತೆಯೊಂದಿಗೆ 2019-20 ನೇ ಶೈಕ್ಷಣಿಕ ವರ್ಷದಲ್ಲಿ ಪ್ರಾರಂಭಿಸಲಾಯುತು. ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು ರಾಷ್ಟ್ರೀಯ ಸೇವಾ ಯೋಜನೆ ಮೂಲಕ ಪ್ರಶಿಕ್ಷಣಾರ್ಥಿಗಳಿಗೆ ಸೇವಾ ಮನೋಭಾವವನ್ನು ಬೆಳೆಸುವುದರೊಂದಿಗೆ, ವ್ಯಕ್ತಿತ್ವ ವಿಕಸನ, ಜೀವನಕೌಶಲ್ಯ, ಉದ್ಯೋಗ ಕೌಶಲ್ಯಇನ್ನೂ ಮುಂತಾದ ತರಬೇತಿ ನೀಡುತ್ತಾ ಪ್ರಶಿಕ್ಷಣಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.