ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಭಾಷಾ ಸ೦ಘ

ಪ್ರಶಿಕ್ಷಣಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಕೌಶಲಗಳನ್ನು ಬೆಳೆಸುವುದರೊಂದಿಗೆ ತಮ್ಮ ಶೈಕ್ಷಣಿಕ ಚಟುವಟಿಕೆಗಳನ್ನು ಹೆಚ್ಚು ಉತ್ಸಾಹದಿಂದ ಭಾಗವಹಿಸುವಂತೆ ಮಾಡುವ ಉದ್ದೇಶದಿಂದ ಭಾಷಾ ಸಂಘವನ್ನು ಸ್ಥಾಪಿಸಲಾಗಿದೆ. ಈ ಸಂಘವು ಪ್ರಶಿಕ್ಷಣಾರ್ಥಿಗಳನ್ನು ಭಾಷಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಅಭಿಪ್ರೇರಿಸುವ ಕಾರ್ಯವನ್ನೂ ಸಹ ಮಾಡುತ್ತಿದೆ. ಹಾಗೂ ಸಂಘದ ವತಿಯಿಂದ ಕೈಗೊಳ್ಳುವಂತಹ ಶೈಕ್ಷಣಿಕ ಚಟುವಟಿಕೆಗಳು ಹೆಚ್ಚು ಮಾಹಿತಿ ಪೂರ್ಣವಾಗಿದ್ದು ಪ್ರಶಿಕ್ಷಣಾರ್ಥಿಗಳ ಭಾಷಾ ಪ್ರೌಢಿಮೆಯನ್ನು ಹೆಚ್ಚಿಸುವುದರೊಂದಿಗೆ ಲಭ್ಯವಿರುವ ಸಮಯಾವಕಾಶಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮಾಡುವ ಒಂದು ಉತ್ತಮ ವೇದಿಕೆಯಾಗಿದೆ.
ಪ್ರಶಿಕ್ಷಣಾರ್ಥಿಗಳಲ್ಲಿ ಸೃಜನಾತ್ಮಕ ಬರವಣಿಗೆ ಹಾಗೂ ಓದುವ ಕೌಶಲಗಳನ್ನು ವೃದ್ಧಿಸುವ ದೃಷ್ಟಿಯಿಂದ ವಾರ್ಷಿಕವಾಗಿ “Inspire” ಮತ್ತು “ಚಿಗುರು” ಎಂಬ ವಾರ್ಷಿಕ ಹೊತ್ತಿಗೆಗಳನ್ನು ಹೊರತರಲಾಗುತ್ತಿದೆ.

ಉದ್ದೇಶಗಳು:

  • ಸಂಘದ ಸದಸ್ಯರಿಗೆ ಉತ್ತಮ ಸಂವಹನ ಕೌಶಲಗಳನ್ನು ಬೆಳೆಸುವುದು.
  • ಪ್ರಶಿಕ್ಷಣಾರ್ಥಿಗಳಿಗೆ ತಮ್ಮ ಭವಿಷ್ಯದ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ ನಾಯಕತ್ವ, ತಂಡಸ್ಪೂರ್ತಿ, ಪರಸ್ಪರ ಸಹಕಾರ ಮತ್ತು ಮುಂದಾಳತ್ವ ವಹಿಸುವಿಕೆ ಮುಂತಾದ ಗುಣಗಳನ್ನು ಬೆಳೆಸುವ ತರಬೇತಿ ನೀಡುವುದು.
  • ಪ್ರಶಿಕ್ಷಣಾರ್ಥಿಗಳಿಗೆ ಸಾಮಾಜಿಕ ಹಾಗೂ ನೈತಿಕ ಜವಾಬ್ದಾರಿಗಳ ಅರಿವು ಮೂಡಿಸುವುದು
  • ಉನ್ನತ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರೊಂದಿಗೆ ತಾವು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳ ಪ್ರತಿಷ್ಟೆ ಹಾಗೂ ಗೌರವವನ್ನು ಎತ್ತಿಹಿಡಿಯುವಂತೆ ಮಾಡುವುದು.