ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಇತ್ತೀಚಿನದು > ಶಿಕಾರಿಪುರದ ಕುಮದ್ವತಿ ಬಿ.ಇಡಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

ಶಿಕಾರಿಪುರದ ಕುಮದ್ವತಿ ಬಿ.ಇಡಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ

Deepa S
ಕು. ದೀಪಾ ಎಸ್
87.07%
Nikitha S K
ಕು. ನಿಕಿತಾ ಎಸ್.ಕೆ
87.07%

2014-2015 ನೇ ಸಾಲಿನ ಶೈಕ್ಷಣಿಕ ವರ್ಷದ ಕುವೆಂಪು ವಿಶ್ವವಿದ್ಯಾನಿಲಯದ ಬಿ.ಇಡಿ ದ್ವಿತೀಯ ಸೆಮಿಸ್ಟರ್‌ನ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಪ್ರಕಟವಾಗಿದ್ದು, ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ 87 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಹಾಗೂ 7 ಪ್ರಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಪ್ರಶಿಕ್ಷಣಾರ್ಥಿಗಳಾದ ಕು. ದೀಪಾ ಎಸ್ ಹಾಗೂ ಕು. ನಿಕಿತಾ ಎಸ್.ಕೆ ಇವರು ಶೇ 87.07 ಅಂಕಗಳನ್ನು ಪಡೆದುಕೊಂಡು ಶಿಕ್ಷಣ ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಅಭೂತಪೂರ್ವ ಯಶಸ್ಸಿಗಾಗಿ ಸಂಸ್ಥೆಯ ಆಡಳಿತ ಮಂಡಳಿಯು ಪ್ರಾಚಾರ್ಯರನ್ನು, ಸಿಬ್ಬಂಧಿ ವರ್ಗದವರನ್ನು ಹಾಗೂ ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿದ್ದಾರೆ.