ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ > ಮಾಧ್ಯಮಗಳಲ್ಲಿ > ಘನ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ

ಘನ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತು ಉಪನ್ಯಾಸ

ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯವು ರಾಷ್ಟ್ರೀಯ ಸೇವಾಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ವಿವೇಕನಗರದ ತರಲಗಘಟ್ಟ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಫೆಬ್ರವರಿ 22 ರಿಂದ 28 ರ ವರೆಗೆ ಶಿಬಿರ ನಡೆಯಲಿದ್ದು ಸಂಸದ ಬಿ.ವೈ ರಾಘವೇಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಶಿಬರದ ಮೂರನೇ ದಿನದಂದು ಸಂಪನ್ಮೂಲ ವ್ಯಕ್ತಿಯಾಗಿ ಪ್ರತಾಪ್‌ ಎಮ್.ಎಲ್‌ ಆಗಮಿಸಿದ್ದು , ಪ್ರಶಿಕ್ಷಣಾರ್ಥಿಗಳಿಗೆ ಘನತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತಾಗಿ ಪ್ರಾಯೋಗಿಕವಾಗಿ ಉಪನ್ಯಾಸ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶಿವಕುಮಾರ್‌ ಜಿ.ಎಸ್‌ , ಶಿವರಾಜ್‌, ಡಾ.ರವಿ ಹೆಚ್‌, ಡಾ.ಕಿರಣ್‌ ಕುಮಾರ್‌ ಕೆ.ಎಸ್‌, ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತ್ತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.