Kumadvathi College of Education

Shikaripura
  (08187) 222383, 222067
  kumadvathibed@gmail.com
Kumadvathi College of Education > Media Watch > ಅನುಪಯುಕ್ತ ವಸ್ತುವಿನಿಂದ ಕರಕುಶಲ ವಸ್ತು ತಯಾರಿಕೆ : ಕಸದಲ್ಲಿ ರಸ

ಅನುಪಯುಕ್ತ ವಸ್ತುವಿನಿಂದ ಕರಕುಶಲ ವಸ್ತು ತಯಾರಿಕೆ : ಕಸದಲ್ಲಿ ರಸ

ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಹಾಗೂ ಸುಗಂಧ ಸಾಂಸ್ಕೃತಿಕ ವೇದಿಕೆ ಅಡಿಯಲ್ಲಿ “ಕಸದಲ್ಲಿ ರಸ” ಎಂಬ ಶೀರ್ಷಿಕೆಗೆ ಪೂರಕವಾಗಿ ಅನುಪಯುಕ್ತ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಪ್ರಶಿಕ್ಷಣಾರ್ಥಿಗಳು ತಮ್ಮ ಮನೆಯಲ್ಲಿನ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಉತ್ತಮ ಕರಕುಶಲ ವಸ್ತುಗಳನ್ನು ತಯಾರಿಸಿ ತಮ್ಮ ಸೃಜನಾತ್ಮಕತೆಯನ್ನು ತೋರಿಸಿದರು. ಹಾಗೂ ತಾವು ತಯಾರಿಸಿದ ಕರಕುಶಲ ವಸ್ತುಗಳನ್ನು ಮತ್ತು ಉಪಯುಕ್ತ ವಸ್ತುಗಳನ್ನು ತೀರ್ಪುಗಾರರ ಮುಂದೆ ಸಾದರಪಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಯವರು ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.