Kumadvathi College of Education

Shikaripura
  (08187) 222383, 222067
  kumadvathibed@gmail.com
Kumadvathi College of Education > Media Watch > ಕೆ.ಸಿ.ಇ ವಾರ್ಷಿಕ ಸ್ನೇಹ ಸಮ್ಮೇಳನ

ಕೆ.ಸಿ.ಇ ವಾರ್ಷಿಕ ಸ್ನೇಹ ಸಮ್ಮೇಳನ

ಇತ್ತೀಚಿಗೆ ಶಿಕಾರಿಪುರದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ನಾಲ್ಕನೇ ಸೆಮಿಸ್ಟರ್‌ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 2020-21 ಸಾಲಿನ ಸುಜ್ಞಾನ ವಾರ್ಷಿಕ ಸಂಚಿಕೆ, ಭಾಷಾಸಂಘದ ಚಿಗುರು ಮತ್ತು ಇನ್ಸ್ಪೈರ್ ನಿಯತಕಾಲಿಕೆಗಳು, ಸಮಾಜ ವಿಜ್ಞಾನ ಸಂಘದ ನಿಯತ ಕಾಲಿಕೆ, ವಿಜ್ಞಾನ ಸಂಘದ ನಿಯತ ಕಾಲಿಕೆಗಳನ್ನ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿವಮೊಗ್ಗ ಡಯಟ್‌ ನ ಹಿರಿಯ ಉಪನ್ಯಾಸಕ ಡಾ. ಹರಿಪ್ರಸಾದ್‌, ಎನ್‌ ಇ ಪಿ 2020ರ ಶೈಕ್ಷಣಿಕ ಹೊಸ ದೃಷ್ಟಿಕೋನದ ಮುಖ್ಯಾಂಶಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಎಸ್‌.ಎಸ್‌ ಗದಗ, ಕಾಲೇಜಿನ ಪ್ರಾಚಾರ್ಯರಾದ ಡಾ. ಜಿ.ಆರ್‌ ಹೆಗಡೆ, ಪ್ರಾಚಾರ್ಯರಾದ ಡಾ.ಶಿವಕುಮಾರ್‌ ಜಿ.ಎಸ್‌, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.