ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ

ಶಿಕಾರಿಪುರ

ಗ್ರ೦ಥಾಲಯ

ನಮ್ಮ ಗ್ರಂಥಾಲಯವು 21.4 X 9.5 ಚದರ ಅಡಿಯ ವಿಸ್ತೀರ್ಣದಲ್ಲಿ ದೊಡ್ಡದಾದ ಸಭಾಂಗಣದಲ್ಲಿ ಉತ್ತಮವಾದ ಗಾಳಿ ಬೆಳಕು ಇರುವ ಅರೋಗ್ಯಕರ ವಾತಾವರಣದಲ್ಲಿ ಸ್ಥಾಪಿತವಾಗಿದೆ. ಏಕಕಾಲದಲ್ಲಿ ನೂರು ವಿದ್ಯಾರ್ಥಿಗಳು ಆಸೀನರಾಗಲು ವ್ಯವಸ್ಥಿತವಾದ ಓದುವ ಮೇಜುಗಳು, ಕುರ್ಚಿಗಳು ಇವೆ. ನಮ್ಮ ಗ್ರಂಥಾಲಯ ವಿಭಾಗವು ಕೆಳಗಿನ ಸಿಬ್ಬಂಧಿ ವರ್ಗದವರನ್ನು ಹೊಂದಿದೆ.

ಒಬ್ಬರು ಗ್ರಂಥಪಾಲಕರು ಹಾಗೂ ಗ್ರಂಥಾಲಯ ಸಹಾಯಕರು

  • ಶ್ರೀ ವಿಶ್ವನಾಥ ಜಿ – ಗ್ರಂಥಪಾಲಕರು
  • ಶ್ರೀಮತಿ ಕವಿತಾ ಹರವಿಶೆಟ್ಟರ್ – ಗ್ರಂಥಾಲಯ ಸಹಾಯಕರು

ಪುಸ್ತಕಗಳನ್ನು ಹೊಂದಿಸಿರುವುದು:

ಪುಸ್ತಕಗಳನ್ನು ಡಿವೆ ಡೆಸಿಮಲ್ ವರ್ಗಿಕರಣ ಪ್ರಕಾರ ವಿಂಗಡಿಸಲಾಗಿದೆ. ಹಾಗೂ ಸ್ವಲ್ಪ ಮಾರ್ಪಾಡಿನೊಂದಿಗೆ ಬಿ.ಇಡಿ ಪಠ್ಯಕ್ರಮಕ್ಕೆ ಅನುಗುಣವಾಗಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪುಸ್ತಕಗಳನ್ನು ಸರಿಯಾಗಿ ಪುಸ್ತಕ ದಾಸ್ತಾನು ಕೊಠಡಿಯಲ್ಲಿ ಇಡಲಾಗಿದೆ. ನಂತರ ಪಠ್ಯಕ್ರಮದಲ್ಲಿ ಇರುವ ಪ್ರಕಾರವಾಗಿ ಸರಣಿಯಾಗಿ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಬೇರೆ ಬೇರೆ ಕಪಾಟುಗಳಲ್ಲಿ ಜೋಡಿಸಲಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮದ ಪುಸ್ತಕಗಳನ್ನು ಬೇರೆ ಬೇರೆ ಯಾಗಿ ಜೋಡಿಸಿ ಇಡಲಾಗಿದೆ.

ಓಪನ್ ಆಕ್ಸಸ್ ಸಿಸ್ಟಮ್:

ಇದೊಂದು ವಿಶೇಷವಾದ ಸೌಲಭ್ಯ ವಿದ್ಯಾರ್ಥಿಗಳು ಹಾಗೂ ಭೋಧಕ ಸಿಬ್ಬಂಧಿ ಯವರು ಅವರಿಗೆ ಬೇಕಾದ ಪುಸ್ತಕಗಳನ್ನು ಸುಲಭವಾಗಿ ಹುಡಿಕಿಕೊಳ್ಳಲು ಅವರ ಹತ್ತಿರದ ಕಪಾಟುಗಳಲ್ಲಿಯೇ ಇಟ್ಟು ಇನ್ನು ಹತ್ತಿರವಾಗಿಸಿದೆ ಇದನ್ನು ತುಂಬಾ ಕಾಳಜಿ ಮತ್ತು ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದು, ಓದುಗರು ಯಾವುದೆ ಅಡೆತಡೆ ಇಲ್ಲದೆ ಬೇಗನೆ ಪುಸ್ತಕಗಳು ಕೈಗೆಟಕುವಂತಾಗಿದೆ ವಿದ್ಯಾರ್ಥಿಗಳ ಓದಿನ ಹವ್ಯಾಸವನ್ನು ಹೆಚ್ಚಿಸುವುದು ಸಹ ಇದರ ಉದ್ದೇಶವಾಗಿದೆ.

’ಲಿಬ್ ಸಾಪ್ಟ್’ ಗ್ರಂಥಾಲಯ ತಂತ್ರಜ್ಞಾನ :

ಗ್ರಂಥಾಲಯ ಎಲ್ಲಾ ರೀತಿಯ ಪರಿಣಾಮಕಾರಿಯಾದ ನಿರ್ವಹಣೆಗೆ ಈ ’ಲಿಬ್ ಸಾಪ್ಟ್’ ಅನ್ನುವ ತಂತ್ರಜ್ಞಾನವು ಬಹು ಉಪಯೋಗಿಯಾಗಿದೆ. ಇದು ಮನುಷ್ಯನ ಶ್ರಮವನ್ನು ಕಡಿಮೆ ಮಾಡಲು ದೊಡ್ಡಗಾತ್ರದ ಪುಸ್ತಕಗಳನ್ನು ಸುಲಭವಾಗಿ ಕೈಗೆಟಕುವಂತೆ ಮಾಡುವುದಾಗಿದೆ ಇದೊಂದು ವಿಂಡೋಸ್/ ವೆಬ್ ಚಾಲಿತ ತಂತ್ರಜ್ಞಾನವಾಗಿದ್ದು ಯಾವುದೇ ವಿಂಡೋಸ್ ಪ್ರೋಗ್ರಾಮ್ನಲ್ಲಿ ಚಾಲಿತವಾಗುತ್ತದೆ. ಹಾಗೂ ಅದ್ಬುತವಾದ ಗ್ರಾಫಿಕಲ್ ಇಂಟರ್ ಫೇಸ್ ಒಳಗೊಂಡಿದೆ ಯಾವುದೇ ಹಿನ್ನಲೆಯಿಂದ ಬಂದಿರುವ ಓದುಗ ಆಗಿದ್ದರೂ ಸಂಪೂರ್ಣವಾಗಿ ಇದು ಗಣಕೀಕೃತವಾಗಿರುವುದರಿಂದ ಎಲ್ಲಿಂದ ಬೇಕಾದರು ಕೆಲವೇ ಪದಗಳನ್ನು ಬೆರಳಚ್ಚು ಮಾಡುವುದರಿಂದ ಉಪಯೋಗ ಪಡೆಯಬಹುದು.

ಎನ್ಲಿಸ್ಟ್ (INFLIBNET) 6,000+ಅಂತರರ್ಜಾಲ ಪತ್ತಿಕೆಗಳು, 97,000+ಅಂತರ್ಜಾಲ ಪುಸ್ತಕಗಳು

ಅಂತರ್ಜಾಲ ಪತ್ರಿಕೆಗಳು, ಅಂತರ್ಜಾಲ ನಿಯತಕಾಲಿಕೆಗಳು, ಅಂತರ್ಜಾಲ ಪುಸ್ತಗಳು ಇವೆಲ್ಲವು ಎನ್ಲಿಸ್ಟ್ ಪ್ರೋಗ್ರಾಮ್ನ ಅಂತರರ್ಜಾಲ ಸಂಪನ್ಮೂಲಗಳಾಗಿವೆ.